Wednesday, January 5, 2011

ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.

ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.

ಶೇಷಾದ್ರಿವಾಸು - ಬರಹ - ಕನ್ನಡ ಗಣಕ ಪರಿಷತ್ - ಕಲಿತ - ನುಡಿ

ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟು ಆಗಿರೋದು ಶೇಷಾದ್ರಿವಾಸು ಇಂದ. ಯಾಕೆಂದರೆ, ವಾಸು ಆಕೃತಿ ಫಾಂಟ್ಸ್ ೧೯೯೭ ನಲ್ಲಿ ಕದ್ದು ಬರಹ ಮಾಡಿದ್ದಾನೆ. ಇದನ್ನು ವಾಸುನೆ ಜುಲೈ ೨೦೦೪ ರಲ್ಲಿ ಒಂದು ಈಮೇಲ್ ಬರೆದು ತಿಳಿಸಿದ್ದಾನೆ. ಬರಹ ಕದ್ದು ಮಾಡಿದ್ದು ಅಂಥ ವಾಸುನೆ ಒಪ್ಪಿಕೊಂಡಿದ್ದಾನೆ. ವಾಸು ಕದ್ದು ಬರಹ ೧.೦ ಮಾಡಿಲ್ಲದೆ ಹೋದರೆ, ಮುಂದಿನ ಬರಹ ೨.೦ , ೩.೦, ೪.೦, ೫.೦, ೬.೦, ೭.೦, ಮಾಡುವುದಕ್ಕೆ ಆಗುತ್ತಿರಲಿಲ. ವಾಸು ಏನು ಏನು ಮಾಡುತ್ತಿದ್ದನೋ ಅದೆಲ್ಲ ಕದ್ದು ಮಾಡಿದಂಗೆ ಆಗುತ್ತದೆ.

ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ ಹೆಸರುಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ.

ವಾಸು ಬರಹ ಕದ್ದು ಮಾಡಿ, ಕನ್ನಡ ಗಣಕ ಪರಿಷತ ಗೆ ಬರಹ ತಂತ್ರಾಂಶ ವನ್ನು ಉಪಯೋಗಿಸಲು ಕೊಡದೆ ಇದಿದ್ದರೆ , ಕಲಿತ ತಂತ್ರಾಂಶ ವನ್ನು ಮಾಡಲು ಕನ್ನಡ ಗಣಕ ಪರಿಷತ್ ಗೆ ಆಗುತ್ತಿರಲಿಲ್ಲ ಮತ್ತು ನುಡಿ ತಂತ್ರಾಂಶನು ಕರ್ನಾಟಕ ಸರಕಾರಕ್ಕೆ ಮಾರುವುದಕ್ಕೆ ಆಗುತ್ತಿರಲಿಲ್ಲ.

ನುಡಿ ಮತ್ತು ಬರಹ ತಂತ್ರಾಂಶ ಬರುವುದಕ್ಕೆ ಮೊದಲು ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ ಕನ್ನಡ ತಂತ್ರಾಂಶ ವನ್ನು ಉಪಯೋಗಿಸುತ್ತಿದ್ದರು. ೨೪ ಕನ್ನಡ ತಂತ್ರಾಂಶ ತಯಾರಿಕರು ಇದ್ದರು. ಈಗ ಎಸ್ಟು ಇದ್ದರೆ ಅಂಥ ಲೆಕ್ಕ ಹಾಕಬೇಕು?

ನುಡಿ ಮತ್ತು ಬರಹ ಕನ್ನಡ ತಂತ್ರಾಂಶ ಬರುವುದಕ್ಕೆ ಮೊದಲು, ಒಬ್ಬ ಕನ್ನಡ ತಂತ್ರಾಂಶ ತಯಾರಿಕರು ಕರ್ನಾಟಕ ಸರ್ಕಾರಕ್ಕೆ , ಅವರ ಕನ್ನಡ ತಂತ್ರಾಂಶ ವನ್ನು , ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ ಉಚಿತ ವಾಗಿ ಉಪಯೋಗಿಸಬಹುದು ಎಂದು ೧೯೯೭ ನಲ್ಲಿ ಪತ್ರ ಬರೆದಿದ್ದರು. ಈ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರ್ಕಾರದಲ್ಲಿ ಆಗಲೇ ಕಚೇರಿಗಳಲ್ಲಿ ಉಪಯೋಗಿಸುತ್ತಿದ್ದರು.

ಕನ್ನಡ ಗಣಕ ಪರಿಷತ್ ಒಂದು ಹವ್ಯಾಸಿ ಸಂಸ್ಥೆ ಅಂಥ ತೇಜಸ್ವಿ ಯವರೇ ಹೇಳಿದ್ದಾರೆ.

ಕನ್ನಡ ಗಣಕ ಪರಿಷತ್ ಗೆ ನುಡಿ ತಂತ್ರಾಂಶ ಮಾಡಲು ಕರ್ನಾಟಕ ಸರ್ಕಾರ ೩೫ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದರು. ಈ ದುಡ್ಡು ಯಾರು ಯಾರಿಗೆ ಹೋಗಿದೆ ಅಂಥ ಕರ್ನಾಟಕ ಸರ್ಕಾರ ಯಾಕೆ ಹೇಳುತ್ತಿಲ್ಲ. ಇದರಲ್ಲಿ ಗುಟ್ಟು ಏನು ? ಕನ್ನಡ ಗಣಕ ಪರಿಷತ್ ನವರಿಗೆ ಈ ದುಡ್ಡು ಎನ್ ಆಗಿದೆ ಅಂಥ ಗೊತ್ತು. ಕನ್ನಡ ಗಣಕ ಪರಿಷತ್ ಯಾಕೆ ಏನು ಹೇಳುತ್ತಿಲ್ಲ?

ಕರ್ನಾಟಕ ಸರಕಾರ ದಿಂದ ದುಡ್ಡು ತೆಗೆದು ಕೊಂಡ, ಕನ್ನಡ ಗಣಕ ಪರಿಷತ್ ಯಾಕೆ ನಾವು ಕನ್ನಡಕ್ಕೆ ಉಚಿತ ಸೇವೆ ಮಾಡುತ್ತಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ಓಡಾಡಬೇಕು?

ಕನ್ನಡ ಗಣಕ ಪರಿಷತ್ ಕರ್ನಾಟಕ ಸರ್ಕಾರ ವನ್ನು ತಪ್ಪು ದಾರಿ ಗೆ ಹೇಳೆದಿದ್ದಾರೆ ಮತ್ತು ಕನ್ನಡ ತಂತ್ರಾಂಶ ವನ್ನು ನಾವೇ ಮಾಡಿದ್ದೇವೆ ಅಂಥ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.

ಕನ್ನಡ ಗಣಕ ಪರಿಷತ್ ಗೆ ತಂತ್ರಾಂಶ ಅಂದರೆ ಏನು ಅಂಥ ನು ಗೊತ್ತಿರಲಿಲ್ಲ ಮತ್ತು ಎಲ್ಲರ ಕಣ್ಣಿಗೆ ಮಣ್ಣು ಎರಚಿದ್ದಾರೆ.

ಕನ್ನಡ ಗಣಕ ಪರಿಷತ್ ಗೆ ಕರ್ನಾಟಕ ಸರ್ಕಾರ ದುಡ್ಡು ಕೊಟ್ಟು ಹೊಸ ಕನ್ನಡ ತಂತ್ರಾಂಶ ಮಾಡಿ ಅಂಥ ಹೇಳಿದ್ದು. ಈಗ ಕನ್ನಡ ಗಣಕ ಪರಿಷತ್ ಕದ್ದು ಮಾಡಿರುವ ನುಡಿ ಕನ್ನಡ ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಕೊಟ್ಟಿದ್ದಾರೆ. ಕನ್ನಡ ಗಣಕ ಪರಿಷತ್ ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಕನ್ನಡ ಗಣಕ ಪರಿಷತ್ ಅನ್ನು ಕರ್ನಾಟಕ ಸರ್ಕಾರ ದವರು ದೂರ ಇಡಬೇಕು.

ಕರ್ನಾಟಕ ಸರ್ಕಾರ, ನುಡಿ ತಂತ್ರಾಂಶ ವನ್ನು ಎಲ್ಲ ಸರ್ಕಾರ ಕಚೇರಿಯಲ್ಲಿ ಕಡ್ಡಾಯವಾಗಿ ಉಪಯೋಗಿಸಬೇಕೆಂದು ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರ ಬೇರೆ ಕನ್ನಡ ತಂತ್ರಾಂಶ ತಯಾರಿಕರಿಗೆ ಮೋಸ ಮಾಡಿದ್ದಾರೆ.


ಕನ್ನಡಿಗರು, ನಾವೆಲ್ಲ ಸೇರಿ ಇದಕ್ಕೆ ಏನು ಮಾಡಬೇಕೆಂದು ಒಂದು ದಾರಿ ನೋಡಬೇಕು.

ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು ಕರ್ನಾಟಕ ಸರಕಾರದಲ್ಲಿ.
ಕನ್ನಡವನ್ನು ತಂತ್ರಾಂಶ ದಾಲ್ಲಿ ಸರಿಯಾಗಿ ಅಳವಡಿ ಸದೇಹೊದರೆ, ಕನ್ನಡ ಆಡಳಿತ ಭಾಷೆ ಆಗುವುದು ಕಸ್ಟ ಆಗುತ್ತೆ. ಕರ್ನಾಟಕ ಸರ್ಕಾರದಲ್ಲಿ ಈಗ ಆಗಿರುವ ತಪ್ಪನೆಲ್ಲ ಸರಿಪಡಿಸಬೇಕು.
ಕನ್ನಡ ವನ್ನು ಸರಿಯಾಗಿ ತಂತ್ರಾಂಶ ದಲ್ಲಿ ಅಳವಡಿಸಿದರೆ, ಜಿಲ್ಲಾ, ತಾಲೂಕು , ಹೋಬಳಿ, ಹಳ್ಳಿ ಮತ್ತು ಎಲ್ಲ ಕನ್ನಡಿಗರು ಚೆನ್ನಾಗಿ ಮುಂದೆ ಬರುತ್ತಾರೆ.
ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಹಳ್ಳಿ ಗಳ, ಕನ್ನಡಿಗರ ಮಕ್ಕಳು ಕನ್ನಡದಲ್ಲಿ ಓದಿ ಮುಂದೆ ಬರುವುದಕ್ಕೆ ಕಸ್ಟ ಆಗುತ್ತಿದೆ. ಇದನೆಲ್ಲ ನಾವು ಗಮನಿಸಬೇಕು. ಇವರೆಲ್ಲ ಬೆಂಗಳುರಿಗೆ ಕೆಲಸ ಹುಡುಕಲು ಬಂದ್ಗ ಎಸ್ಟು ಕಸ್ಟ ಪಡುತ್ತಾರೆ ಅಂಥ ನಾವೆಲ್ಲ ಗಮನಿಸಿ ಒಂದು ದಾರಿ ತೋರಿಸಬೇಕು.

ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು. ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ.

ಈ ಆಡಳಿತ ದಲ್ಲಿ ಎಲ್ಲ ಕಡೆ, ಅಂದರೆ, ವಿಧಾನ ಸೌಧ ಇಂದ ಎಲ್ಲ ಹಳ್ಳಿ ಯವರಿಗೆ, ಕನ್ನಡ ಕಡ್ಡಾಯವಾಗಿ ಇರಬೇಕಾದರೆ ಕರ್ನಾಟಕ ಸರ್ಕಾರದಲ್ಲಿ , ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು.


ಚಾರಿತ್ರಿಕ ತಿರುವಿನಲ್ಲ್ಲಿ ಕನ್ನಡ ಭಾಷೆಯ ಭವಿಷ್ಯ.
ಆದುನಿಕ ಯುಗದಲ್ಲಿ ಕನ್ನಡದ ಸ್ಥಿತಿ ಗತಿಗಳನ್ನು ಕನ್ನಡಿಗರು ಗಮನಿಸಬೇಕು.
ಕರ್ನಾಟಕ ಸರ್ಕಾರದ ತಪ್ಪು ಧೋರಣೆಗಳು.
ಕನ್ನಡ ತಂತ್ರಾಂಶಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.

No comments:

Post a Comment